ದೂರದರ್ಶನದಲ್ಲಿ ತೋರಿಸುವ ಕಾರ್ಯಕ್ರಮಗಳಿಂದ ಬೃಹತ್ ಪ್ರಮಾಣದಲ್ಲಿ ಕಪ್ಪು ಲಹರಿಗಳು ಪ್ರಕ್ಷೇಪಿತವಾಗುತ್ತವೆ. ದೂರದರ್ಶನವನ್ನು ನೋಡುವುದರಿಂದ ನಮ್ಮಲ್ಲಿಯ ಒಳ್ಳೆಯ ಗುಣಗಳು ಕಡಿಮೆಯಾಗಿ ದೋಷಗಳು ಹೆಚ್ಚಾಗುತ್ತವೆ. ಇದರಿಂದ ಮನಸ್ಸು ಮತ್ತು ಮನೆಯ ವಾತಾವರಣವು ಕಲುಷಿತವಾಗುತ್ತದೆ. ದೂರದರ್ಶನದಿಂದಾಗಿ ಸಮಯವು ವ್ಯರ್ಥವಾಗುತ್ತದೆ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಸ್ವಭಾವದೋಷ ಹಾಗೂ ಭಾವನೆಗಳೂ ಹೆಚ್ಚಾಗುತ್ತವೆ. ನಾಮಜಪ ಮತ್ತು ಸೇವೆಯಿಂದ ಪ್ರಾಪ್ತವಾದ ಸಾತ್ತ್ವಿಕತೆ ದೂರದರ್ಶನವನ್ನು ನೋಡುವುದರಿಂದ ಕಡಿಮೆಯಾಗಿ ಭಾವನೆಯು ಹೆಚ್ಚಾಗುತ್ತದೆ. ಆದುದರಿಂದ ಅವಶ್ಯಕತೆಗನುಸಾರವಾಗಿ ಕೇವಲ ಮಹತ್ವದ ಕಾರ್ಯಕ್ರಮಗಳನ್ನು ಅಂದರೆ ವರದಿಗಳು, ಹಬ್ಬ-ಉತ್ಸವಗಳ ಮಾಹಿತಿಯಿರುವಂತಹ ಕಾರ್ಯಕ್ರಮಗಳು ಮತ್ತು ಇತರ ಸಾತ್ತ್ವಿಕ ಕಾರ್ಯಕ್ರಮಗಳನ್ನು ಮಾತ್ರ ವೀಕ್ಷಿಸಬೇಕು. ಪ್ರಸ್ತುತ ಕಾಲದಲ್ಲಿ ಮಕ್ಕಳು ತಮ್ಮ ಸಮಯವನ್ನು ದೂರದರ್ಶನ ನೋಡುವುದರಲ್ಲಿ ವ್ಯರ್ಥ ಮಾಡದೇ, ಸಾಧನೆಯನ್ನು ಹೆಚ್ಚಿಸಬೇಕು ಹಾಗೂ ರಾಷ್ಟ್ರ ಮತ್ತು ಧರ್ಮಗಳ ಕಾರ್ಯದಲ್ಲಿ ಪಾಲ್ಗೊಳ್ಳಬೇಕು.