Select Language : Marathi , Hindi , English  
Advanced Search


Clear List

ಸ್ವಭಾವದೋಷಗಳನ್ನು ದೂರ ಮಾಡಿ ವ್ಯಕ್ತಿತ್ವವನ್ನು ವಿಕಾಸಗೊಳಿಸಿರಿ ಹಾಗೂ ಜೀವನವನ್ನು ಆನಂದಮಯಗೊಳಿಸಿರಿ!


ಶ್ರೇಯಾಂಕ : Average Rating : 5.50 From 2 Voter(s) | ವೀಕ್ಷಕರು : 494

 ವಿದ್ಯಾರ್ಥಿಗಳೇ, ಇತ್ತೀಚೆಗೆ ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಕ್ಕಾಗಿ ಅಭ್ಯಾಸ, ವ್ಯಾಯಾಮ, ವಿವಿಧ ಭಾಷೆಗಳ ಅಧ್ಯಯನ, ಸ್ಪರ್ಧೆ ಪರೀಕ್ಷೆ ಇತ್ಯಾದಿ ವಿವಿಧ ಮಾರ್ಗಗಳನ್ನು ಅವಲಂಬಿಸಲಾಗುತ್ತದೆ. ನಿಜವಾಗಿಯೂ ವ್ಯಕ್ತಿಗಳಲ್ಲಾಗುವ ಆಂತರಿಕ ಸುಧಾರಣೆಯೆಂದರೆ ವ್ಯಕ್ತಿತ್ವವಿಕಾಸ! ಭಯ ಮುಂತಾದ ಸ್ವಬಾವದೋಷಗಳ ನಿರ್ಮೂಲನೆ, ಹಾಗೂ ಗುಣಗಳ ಸಂವರ್ಧನೆ ಮಾಡಿ ಆಂತರಿಕ ವಿಕಾಸ ಸಾಧಿಸ ಬಹುದು. ಏಕಾಗ್ರತೆಯ ಅಭಾವ, ಬವಿಷ್ಯದ ಚಿಂತೆ ಇತ್ಯಾದಿ ದೋಷಗಳನ್ನು ಸಹ ಸ್ವಭಾವದೋಷ-ನಿರ್ಮೂಲನೆಯಿಂದ ನಿವಾರಣೆ ಮಾಡಲು ಸಾಧ್ಯವಿರುವುದರಿಂದ ಜೀವನವು ಆನಂದಮಯ ಹಾಗೂ ಆದರ್ಶವಾಗುವುದು. ಸ್ವಭಾವದೋಷ-ನಿರ್ಮೂಲನೆ ಹಾಗೂ ಗುಣಸಂವರ್ಧನೆಯ ಪ್ರಕ್ರಿಯೆಯ ಬಗ್ಗೆ ಸತ್ಸಂಗದಲ್ಲಿ ಮಾಹಿತಿ ದೊರೆಯುತ್ತದೆ.

ಸತ್ಯಂ ಶಿವಂ ಸುಂದರಂಎಂಬಂತಹ ಆಚರಣೆಯಲ್ಲಿರಿ! 

ಸತ್ಯಂ: ಜೀವನದಲ್ಲಿ ಪ್ರತಿಯೊಂದು ಕೃತಿ ಮಾಡುವಾಗ ಸತ್ಯ ಹಾಗೂ ಸದಾಚರಣೆಗಳನ್ನು ಅನುಸರಿಸಿರಿ. 
ಶಿವಂ: ಪ್ರತಿಯೊಂದು ಕೃತಿ ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಮಾಡುವುದರಿಂದ ಹಾಗೂ ಕೃತಿ ಪೂರ್ಣವಾದ ನಂತರದೇವರು ಕೃತಿಯನ್ನು ನಮ್ಮಿಂದ ಮಾಡಿಸಿಕೊಂಡರುಅದಕ್ಕಾಗಿ ದೇವರಿಗೆ ಕೃತಜ್ಞತೆ ವ್ಯಕ್ತಪಡಿಸುವುದರಿಂದ ಕರ್ಮವು ಪವಿತ್ರವಾಗುವುದು. 
ಸುಂದರಂ: ಬಟ್ಟೆಗಳನ್ನು ವ್ಯವಸ್ಥಿತವಾಗಿಡುವುದರಿಂದ ಹಿಡಿದು ಬರವಣಿಗೆ ಸುಂದರವಾಗಿ ಮಾಡುವ ತನಕ ಪ್ರತಿಯೊಂದು ಕೃತಿ ನಾಮಜಪವನ್ನು ಮಾಡುತ್ತಾ ತಪ್ಪುವಿರಹಿತವಾಗಿ ಹಾಗೂ ಪರಿಪೂರ್ಣವಾಗಿ ಮಾಡುವುದರಿಂದ ಅದುಸಾಧನೆಯಾಗುವುದು. (‘ಸಾಧನೆಯೆಂದರೆ ಈಶ್ವರಪ್ರಾಪ್ತಿಯಾಗುವುದಕ್ಕಾಗಿ ಮಾಡುವ ಪ್ರಯತ್ನ) ಈಶ್ವರಸತ್ಯಂ ಶಿವಂ, ಸುಂದರಂಆಗಿದ್ದಾನೆ.

 ಮೇಲಿನಂತೆ ಆಚರಣೆ ಮಾಡಿದರೆ ವ್ಯಾವಹಾರಿಕ ಪ್ರಗತಿ ಆಗಿಯೇ ಅಗುತ್ತದೆ, ಹಾಗೂ ನಾವು ಈಶ್ವರನ ಗುಣಗಳೊಂದಿಗೆ, ಅಂದರೆ ಈಶ್ವರನೊಂದಿಗೆ ಶೀಘ್ರವಾಗಿ ಏಕರೂಪವಾಗುತ್ತೇವೆ. ಮಕ್ಕಳೇ, ‘ತ್ಯಾಗವು ನಮ್ಮ ಸಂಸ್ಕೃತಿಯಾಗಿದೆ! ಇನ್ನೊಬ್ಬರ ವಸ್ತುವನ್ನು ಅವನಿಗೆ ಹೇಳದೇ ತೆಗೆದುಕಳ್ಳುವುದು, ಎಂದರೆವಿಕೃತಿ’, ಅವನಿಗೆ ಹೇಳಿ ತೆಗೆದುಕೊಳ್ಳುವುದುಪ್ರಕೃತಿಹಾಗೂ ನಮ್ಮ ವಸ್ತು ಬೇರೆಯವರಿಗೆ ಕೊಡುವುದು ಎಂದರೆಸಂಸ್ಕೃತಿ’. ಶಿಬಿ ರಾಜನು ಒಂದು ಪಕಿಯ ಜೀವ ಉಳಿಸುವುದಕ್ಕಾಗಿ ತನ್ನ ಶರೀರದ ಮಾಂಸವನ್ನು ನೀಡಿದ ಕಾರಣ ಅವನು ಅಮರನಾದನು. ತೀವೃವಾಗಿ ತಪಶ್ಚರ್ಯ ಮಾಡಿದಂತಹ ದಧೀಚಿಋಷಿ ರಾಕ್ಷಸರ ನಾಶಕ್ಕಾಗಿ ಬೇಕಾಗುವ ಆಯುಧ ನಿರ್ಮಿಸುವುದಕ್ಕಾಗಿ ದೇವತೆಗಳಿಗೆ ತನ್ನ ದೇಹದ ಎಲುಬುಗಳನ್ನು ನೀಡಿದ ಕಾರಣ ಅವರು ಆಧರಣೀಯರಾದರು. ಎಲ್ಲ ಪ್ರಾಣಿಗಳಿಗೆ ಪ್ರಕಾಶ ಹಾಗೂ ಜೀವನ ನೀಡುವುದಕ್ಕಾಗಿ ಸೂರ್ಯನು ಸದಾಕಾಲ ಸ್ವತಃ ಸುಡುತ್ತಾ ಇರುತ್ತಾನೆ, ಆದುದರಿಂದ ಅವನು ಪ್ರಾರ್ಥನಾ ಯೋಗ್ಯನಾಗಿದ್ದಾನೆ. ನದಿಯು ಜನರಿಗೆ ನೀರನ್ನು ಪೂರೈಸುತ್ತಾ ಮುಂದೆ ಹರಿಯುತ್ತದೆಆದುದರಿಂದ ಜನರು ಅದನ್ನು ಪವಿತ್ರವೆಂದು ನಂಬುತ್ತಾರೆ. ತದ್ವಿರುದ್ಧ ಹಳ್ಳ ನೀರನ್ನು ಶೇಖರಿಸುತ್ತದೆ, ಅದು ಆರುವುದು ಹಾಗೂ ಒಣಗುವುದು. ಮನುಷ್ಯ ಸಂಚಯದಿಂದ ಸಂಕುಚಿತ ವೃತ್ತಿಯವನಾಗುತ್ತಾನೆ, ತ್ಯಾಗದಿಂದ ಉದಾರವೃತ್ತಿಯವನಾಗುತ್ತಾನೆ. ತ್ಯಾಗದಲ್ಲಿಯೇ ನಿಜವಾದ ಆನಂದವಿದೆ ಎಂಬುದನ್ನು ಗಮನದಲ್ಲಿಡಿರಿ. 

 ಮಕ್ಕಳೇ, ನಮ್ಮ ವರ್ತನೆ ಹೀಗೆ ಇರಬೇಕು! ತಾಯಿ-ತಂದೆ, ಹಿರಿಯ ವ್ಯಕ್ತಿ, ಶಿಕ್ಷಕರು, ವಿದ್ವಾಂಸರು ಹಾಗೂ ಸಂತರು ಮುಂತಾದವರನ್ನು ಆಧರಿಸಬೇಕು ಹಾಗೂ ಅವರನ್ನು ಗೌರವಿಸಬೇಕು. ಯಾರಾದರೂ ಭೇಟಿಯಾದಾಗ ಅಥವಾ ಭೇಟಿ ಮುಗಿದ ನಂತರ ಅವರನ್ನು ಬೀಳ್ಕೊಡುವಾಗ ನಗುಮುಖದಿಂದ ನಮಸ್ಕಾರ ಮಾಡಬೇಕು. ಎಲ್ಲರೊಂದಿಗೆ ಪ್ರೇಮದಿಂದ ವರ್ತಿಸಬೇಕು ಹಾಗೂ ಅವಶ್ಯಕತೆಗನುಸಾರ ಸಹಾಯ ಮಾಡಬೇಕು. ಬೇರೆಯವರು ಅನುಪಸ್ಥಿತಿಯಲ್ಲಿ ಅವನ್ನು ನಿಂದಿಸುವುದು ಅಥವಾ ಚೇಷ್ಟೆ ಮಾಡಬಾರದು. ಇತರರಿಗೆ ನೀಡಿದ ವಚನ ಹಾಗೂ ಸಮಯವನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು. ಸರ್ವಸಾಮಾನ್ಯವಾದ ಶಿಷ್ಟಾಚಾರವನ್ನು ಪಾಲನೆ ಮಾಡಬೇಕು, ಉದಾ. ನಾಲ್ಕು ಜನರ ಮಧ್ಯೆಯಿರುವಾಗ ಬಾಯಿಗೆ ರುಮಾಲು ಹಿಡಿಯದೆ ಶೀನುವುದು,ಕೆಮ್ಮುವುದು, ಅಥವಾ ಆಕಳಿಸಬಾರದು, ಮಾರ್ಗದಲ್ಲಿ ಉಗುಳಬಾರದು ಅಥವಾ ಗಲೀಜು ಮಾಡಬಾರದು. 




ಸಂಬಂಧಿತ ಲೇಖನಗಳು

» ತಾಯಿ-ತಂದೆಯರ ಮಹತ್ವ
» ಸುಸಂಸ್ಕಾರಿತ ಭಾವಿ ಪೀಳಿಗೆಯ ನಿರ್ಮಾಣಕ್ಕಾಗಿ ನಮ್ಮ ಪ್ರಯತ್ನ
» ಸಂಸ್ಕಾರ
» ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿರಿ ಮತ್ತು ನೀವೇ ನಿಮ್ಮ ಯಶಸ್ಸಿನ ಶಿಲ್ಪಿಗಳಾಗಿರಿ !
» ಸತ್ಯವಾದಿಗಳಾಗಿ ಈಶ್ವರನಿಗೆ ಪ್ರಿಯವೆನಿಸಿರಿ!


ಪ್ರತಿಕ್ರಿಯೆಗಳು

ಪ್ರತಿಕ್ರಿಯಿಸಿರಿ ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
* ಹೆಸರು


* ವಿ-ಅಂಚೆ ವಿಳಾಸ (Email Address)




*Image Validation (?)


*ಪ್ರತಿಕ್ರಿಯೆ





ಲೇಖನಕ್ಕೆ ಶ್ರೇಯಾಂಕ ನೀಡಿರಿ :

1

2

3

4

5

6

7

8

9

10
ಕಡಿಮೆ ಹೆಚ್ಚು
Itihas
Vadhdivas
Participate

Subscribe to Balsanskar

Powered by us.groups.yahoo.com