Select Language : Marathi , Hindi , English  
Advanced Search


ನಮ್ಮ ಉದ್ದೇಶ


ಶ್ರೇಯಾಂಕ : Average Rating : 6.17 From 24 Voter(s) | ವೀಕ್ಷಕರು : 3885
By Balsanskar Kannada

ಇಂಟರನೆಟ್ ಅಥವಾ ಅಂತರಜಾಲದಲ್ಲಿ ಮಕ್ಕಳಿಗಾಗಿ ಅನೇಕ ಸಂಕೇತಸ್ಥಳಗಳು ಉಪಲಬ್ಧವಿದೆ. ಅನೇಕ ದೂರಚಿತ್ರವಾಹಿನಿಗಳಲ್ಲಿ, ಹಾಗೆಯೇ ವಿವಿಧ ಸಂಸ್ಥೆಗಳು ಮತ್ತು ಮಂಡಳಿಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಅನೇಕ ಉಪಕ್ರಮಗಳನ್ನು ನಡೆಸುತ್ತವೆ. ಹೀಗಿದ್ದರೂ ಸಂಕೇತಸ್ಥಳದಲ್ಲಿ ಏನು ವಿಶೇಷತೆಯಿದೆ? ಅವುಗಳೆಲ್ಲದರ ಜೊತೆ ಇದೂ ಒಂದು ಎಂದು ನಿಮಗೆ ಅನಿಸಬಹುದು.

ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವುದೆಂದರೆ ಅವರ ಅಂತರಂಗ ವಿಕಸನವಾಗುವುದು. ಅದಕ್ಕಾಗಿ ಮಕ್ಕಳಲ್ಲಿ ಪ್ರಾಮಾಣಿಕತೆ, ಸಮಯ ಪರಿಪಾಲನೆ, ನಮ್ರತೆ ಮುಂತಾದ ಗುಣಗಳ ಪರಿಚಯವಾಗಬೇಕೆಂಬುದಷ್ಟೇ ನಮ್ಮ ಉದ್ದೇಶವಾಗಿರದೆ ಎಲ್ಲಾ ಗುಣಗಳು ಅವರಲ್ಲಿ ಸಂವರ್ಧನೆ ಆಗುವುದೂ ಸಹ ಅಷ್ಟೇ ಮಹತ್ವದ್ದಾಗಿದೆ. ನಿಜವೆಂದರೆ ನಮ್ಮ ಸಂಸ್ಕೃತಿಯು ಮಹಾನ ಸಂಸ್ಕೃತಿಯಾಗಿದೆ. ಅದರಲ್ಲಿರುವ ವಿವಿಧ ಕತೆಗಳು, ರಾಷ್ಟ್ರಪುರುಷರ ಉದಾಹರಣೆಗಳು, ಧರ್ಮಶಾಸ್ತ್ರದಂತೆ ಆಚರಣೆಗಳು, ಅದರ ಅನುಸಾರ ಕೃತಿ ಮಾಡುವುದರಿಂದ ನಿಜವಾದ ಅರ್ಥದಲ್ಲಿ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ.

ಆದರ್ಶದಿಂದ ನಮಗೆ ಸ್ಫೂರ್ತಿಸಿಗುತ್ತದೆ. ಆದರೆ ಇಂದು ಮಕ್ಕಳಿಗೆ ಚಲನಚಿತ್ರದ ನಟ-ನಟಿಯರು, ಕ್ರಿಕೆಟ ಆಟಗಾರರು, ರಾಜಕಾರಣಿಗಳು ಆದರ್ಶರಾಗಿದ್ದಾರೆ. ದೂರಚಿತ್ರವಾಹಿನಿಗಳಲ್ಲಿ ಬರುವ ಅರ್ಥವಿಲ್ಲದ ವಾದ, ಭ್ರಷ್ಟಾಚಾರ, ಹೊಡೆದಾಟ ಮುಂತಾದವುಗಳಿಂದ ನೋಡಿದ್ದನ್ನೇ ನಿಜವೆಂದು ನಂಬುವ ಮಕ್ಕಳ ಮನಸ್ಸಿನ ಮೇಲೆ ಆಕ್ರಮಣವಾಗುತ್ತದೆ. ಇದೇ ಅವರ ಅಂತರ ಮನಸ್ಸಿನಲ್ಲಿ ಸಂಸ್ಕಾರವಾಗುತ್ತದೆ. ಈಗ ಒಟ್ಟು ಕುಟುಂಬಗಳಿರದ ಕಾರಣ ಮತ್ತು ಪೋಷಕರು ವ್ಯಸ್ತರಾಗಿರುವ ಕಾರಣ ಮಕ್ಕಳಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ತಿತಿಯಲ್ಲಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸುವುದು ಒಂದು ದೊಡ್ಡ ಪ್ರಶ್ನೆಯಾಗಿಬಿಡುತ್ತದೆ.

ಇದೆಲ್ಲವನ್ನು ಅರಿತ ನಂತರ ನಮಗೆ ಸಂಕೇತಸ್ಥಳದ ಅವಶ್ಯಕತೆಯ ಅರಿವಾಯಿತು ಮತ್ತು ನಾವು ಕ್ಷೇತ್ರದಲ್ಲಿ ಕಾಲಿಟ್ಟೆವು. ಮಕ್ಕಳಿಗೆ ಕೇವಲ ಮಾಹಿತಿ ನೀಡುವುದು ನಮ್ಮ ಉದ್ದೇಶವಾಗಿರದೇ, ಅವರಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವ್ಯಕ್ತಿತ್ವದ ವಿಕಾಸವೆಂದರೆ ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ವಿಕಸನವಷ್ಟೇ ಅಲ್ಲದೇ ಆಧ್ಯಾತ್ಮಿಕ ವಿಕಸನವೂ ಆಗಬೇಕಾಗುತ್ತದೆ. ನಮಗೆ ಸರ್ವೋಚ್ಚ ಮತ್ತು ಸತತ ಸಿಗಬಹುದಾದ ಸುಖ ಅಥವಾ ಆನಂದ ಕೇವಲ ಆಧ್ಯಾತ್ಮಶಾಸ್ತ್ರದಿಂದ ಸಿಗುತ್ತದೆ. ಅದಕ್ಕನುಸಾರ ಇಲ್ಲಿ ವಿಷಯಗಳನ್ನು ಮಂಡಿಸಲಾಗಿದೆ.

ಇದನೆಲ್ಲಾ ತಿಳಿದ ಮೇಲೆ ನಿಜವಾದ ಅರ್ಥದಲ್ಲಿ ನಮ್ಮ ವ್ಯಕ್ತಿತ್ವದ ವಿಕಾಸವಾಗಲಿ ಮತ್ತು ನಮ್ಮ ಪಯಣ ಆನಂದ ಪ್ರಾಪ್ತಿಯ ಕಡೆಗೆ ಸಾಗಲಿ, ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ. ಹೀಗೇ ಆದಲ್ಲಿ ಸಂಕೇತಸ್ಥಳದ ಉದ್ದೇಶವು ಸಫಲವಾಗುವುದು.

ನಿಮ್ಮ ಸಹಕಾರದ ಅವಶ್ಯಕತೆ

ಇಲ್ಲಿರುವ ಮಾಹಿತಿಯು ಅನೇಕ ಗ್ರಂಥಗಳಿಂದ ಪಡೆಯಲಾಗಿದೆ. ಮಾಹಿತಿಯಲ್ಲಿ ಯಾವುದಾದರು ತಪ್ಪುಗಳಿರುವ ಸಾಧ್ಯತೆಗಳಿವೆ. ನಿಮಗೆ ತಪ್ಪುಗಳು ಕಂಡುಬಂದಲ್ಲಿ ದಯಮಾಡಿ ನಮಗೆ ತಿಳಿಸಿಕೊಡಬೇಕಾಗಿ ವಿನಂತಿ. ಪ್ರತಿಯೊಂದು ತಪ್ಪನ್ನು ಸುಧಾರಿಸಲು ಪ್ರಯತ್ನಿಸಲಾಗುವುದು. ಹಾಗೆಯೇ ಸಂಕತಸ್ಥಳದಲ್ಲಿ ಯಾವುದಾದರೂ ಸೂಚನೆ, ಬದಲಾವಣೆಗಳನ್ನು ನೀವು ನಮಗೆ ಸೂಚಿಸಬಹುದು. ತಮ್ಮೆಲ್ಲರ ಸಹಕಾರ್ಯದಿಂದ ಸಂಕೇತಸ್ಥಳವನ್ನು ನಾವು ಪರಿಪೂರ್ಣವಾಗಿಸಬಹುದು.




ಸಂಬಂಧಿತ ಲೇಖನಗಳು

» ಸಂಪರ್ಕ
» ಸಂಸ್ಕಾರ
» ಆತ್ಮಬಲ ಹೆಚ್ಚಿಸಿ!
» ಕಳಕಳಿಯ ವಿನಂತಿ!
» ಸಂದೇಹ


ಪ್ರತಿಕ್ರಿಯೆಗಳು

ಸಾಗರ್
April 10, 2013, 2:36 pm

ತುಂಬಾ ಚೆನ್ನ್ನಾಗಿದೆ .
ಗೋವಿಂದ ಶರ್ಮ
December 5, 2012, 12:47 pm

ಅದ್ಬುತ! ಇಂಗ್ಲಿಷ್ನಲ್ಲಿ ಬರದರೆ ತಕ್ಷಣವೇ ಕನ್ನಡಕ್ಕೆ ಭಾಷನ್ತರಿಸುತ್ತಿದೆ ! ಸಂತೋಷವಾಯಿತು.
mukunda chiplunkar
October 21, 2012, 12:29 am

ಒಳ್ಳೆಯ ಬ್ಲಾಗ್ ಆಗಿದೆ. ಇದನ್ನು ಉಪಯೋಗಿಸುವುದೇ ಮಾದತಕ್ಕ ಕರ್ತವ್ಯ .
Keshav
May 9, 2012, 6:07 pm

ತುಂಬಾ ಚೆನ್ನಾಗಿದೆ. ನಾನು ಉಳಿದವರಿಗೂ ಈ ಜಾಲತಾಣದ ಬಗ್ಗೆ ಹೇಳುತ್ತೇನೆ. ನಮ್ಮ ಸಂಸ್ಕೃತಿಯನ್ನು ಮರೆತು ಮಲಗಿರುವವರಿಗೆ ಬಡಿದೆಬ್ಬಿಸುವಂತಿದೆ. ಬಹಳ ಧನ್ಯವಾದಗಳು

ಮನಸು
December 30, 2011, 1:43 pm

ಈ ಅಂತರ್ಜಾಲ ತಾಣವನ್ನು ನೋಡಿದ ಮೇಲೆ ನಮ್ಮಲ್ಲಿ ಮಾತುಗಳೇ ಇಲ್ಲ. ನಮ್ಮ ಸಂಸ್ಕೃತಿಯನ್ನು ಮರೆತು ಮಲಗಿರುವವರಿಗೆ ಬಡಿದೆಬ್ಬಿಸುವಂತಿದೆ. ಬಹಳ ಧನ್ಯವಾದಗಳು ಇಂಗ್ಲೀಷ್ ನಲ್ಲೂ ಸಹ ಇರುವುದರಿಂದ ಅನುಕೂಲವಾಯಿತು ನಮ್ಮ ಮಕ್ಕಳು ಓದಲು ಅನುಕೂಲವಾಗುತ್ತದೆ. ಧನ್ಯವಾದಗಳು.
Chandra
December 24, 2011, 2:37 pm

ಇ ಡೋಂಟ್ ಹವ್ ವರ್ಡ್ಸ್ ಟು ಸೆ ಥ್ಯಾಂಕ್ಸ್..
ಉ ಹವೆ ಬ್ರೌಘ್ತ್ ಮೈ ಚಿಲ್ಧೂದ್ ಬ್ಯಾಕ್..
Shraddha.R.Narvekar
December 14, 2011, 8:06 pm

ತುಂಬಾ ಚ್ಚನಗಿದೆ. ಬಹಳ ಇಷ್ಟ ಆಯಿತು.
ರೇಣುಕಾ ಪ್ರಸಾದ್
December 11, 2011, 1:11 pm

ನಮಸ್ಕಾರ,
ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಾನು ಈ ತಾಣದ ಬಗ್ಗೆ ಹೆಚ್ಚಿನ ಜನರಿಗೆ ತಿಳಿಸುತ್ತೇನೆ.. ಈ ನಿಮ್ಮ ಒಳ್ಳೆಯ ಕಾರ್ಯ ಹೀಗೆ ಮುಂದುವರೆಯಲಿ.
Nagaraj
September 2, 2011, 9:46 pm

It's really great job as wel as good advises for the childrens... These services are needed for this generation. . . I've read this article and i'l tell others to read it. .
kavita
September 2, 2011, 6:45 pm

ತುಂಬಾ ಚೆನಾಗಿದೆ. ಓದಿ ಕುಶಿ ಯಾಯಿತು. ನಾನು ಇತರಿಗೆ ಹೇಳುತೀನಿ.
ಪ್ರಭಾಕರ
August 29, 2011, 8:30 pm

ತುಂಬಾ ಒಳ್ಳೆಯ ಕೆಲಸ ಇಂತಹ ಸಂಕೇತ ಸ್ಥಳಗಳು ಇಂದಿನ ಅವಶ್ಯಕತೆಯಾಗಿದೆ
ಚೇತನಾ ದೇವರಾಜ್
August 22, 2011, 9:48 pm

ಸಂಕೇತಸ್ಥಳ ನೋಡಿ ತುಂಬಾ ಖುಷಿಯಾಯಿತು. ನಿಮ್ಮ ಸೇವೆಗೆ ನಾನು ಸದಾ ಸಿದ್ಧ.
ಮಂಜುನಾಥ
August 22, 2011, 2:41 am

ತುಂಬಾ ಚೆನ್ನಾಗಿದೆ. ನಾನು ಉಳಿದವರಿಗೂ ಈ ಜಾಲತಾಣದ ಬಗ್ಗೆ ಹೇಳುತ್ತೇನೆ.
deepthi
August 14, 2011, 12:26 am

ಪ್ರತಿಯೊಬ್ಬ ಮನುಷ್ಯ ಸತ್ಹ್ಪುರುಶನಾಗಬೇಕೆಂದರೆ ಈ ಸಂಕೇತ ಸ್ಥಳವನ್ನು ಸಂಪೂರ್ಣವಾಗಿ ಓದಿ ಅದನ್ನು ಆಚರನೆಗೆ ತನ್ನಿರಿ .
ಪ್ರತಿಕ್ರಿಯಿಸಿರಿ ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
* ಹೆಸರು


* ವಿ-ಅಂಚೆ ವಿಳಾಸ (Email Address)




*Image Validation (?)


*ಪ್ರತಿಕ್ರಿಯೆ





ಲೇಖನಕ್ಕೆ ಶ್ರೇಯಾಂಕ ನೀಡಿರಿ :

1

2

3

4

5

6

7

8

9

10
ಕಡಿಮೆ ಹೆಚ್ಚು
Itihas
Vadhdivas
Participate

 
Subscribe to Balsanskar Newsletter
Email:
Visit this group