ಪ್ರಸ್ತುತ ಜನರು ಸಾಧನೆಯನ್ನು ಮಾಡುವುದಿಲ್ಲ. ಇಂತಹ ವ್ಯಕ್ತಿಗಳು ಮರಣ ಹೊಂದಿದ ನಂತರ ಅವರ ಆಸೆಗಳು ಅತೃಪ್ತವಾಗಿರುತ್ತವೆ. ಇಂತಹ ವ್ಯಕ್ತಿಗಳ (ಪೂರ್ವಜರ) ಅತೃಪ್ತ ಆಸೆಯ ಪರಿಣಾಮದಿಂದ ಅವರ ಕುಟುಂಬದವರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಉದಾ. : ಕುಟುಂಬದಲ್ಲಿನ ಪ್ರಮುಖ ವ್ಯಕ್ತಿಗೆ ಸರಾಯಿ ಕುಡಿಯುವುದು, ಧೂಮಪಾನ ಮಾಡುವುದು, ಯಾವುದೇ ವೈದ್ಯಕೀಯ ಕಾರಣವಿಲ್ಲದೇ ಮಕ್ಕಳಾಗದಿರುವುದು, ಮಕ್ಕಳು ಬುದ್ಧಿಮಾಂದ್ಯ ಅಥವಾ ಅಂಗವಿಕಲರಾಗುವುದು, ಮಕ್ಕಳು ಎಷ್ಟೇ ಓದಿದರೂ ತಲೆಗೆ ಹತ್ತದಿರುವುದು, ಪರೀಕ್ಷೆಯಲ್ಲಿ ಚನ್ನಾಗಿ ಬರೆದರೂ ಒಳ್ಳೆಯ ಅಂಕ ಬರದಿರುವುದು, ಉತ್ತಮ ಕೌಶಲ್ಯವಿದ್ದರೂ ನೌಕರಿ ಸಿಗದಿರುವುದು ಇತ್ಯಾದಿ ತೊಂದರೆಗಳು. ಇತ್ತೀಚಿನ ಕಾಲದಲ್ಲಿ ಬಹಳಷ್ಟು ಜನರು ಪೂರ್ವಜರಿಗೆ ಮಾಡುವ ಶ್ರಾದ್ಧ- ಪಕ್ಷಗಳನ್ನು ನಿಯಮಿತವಾಗಿ ಮಾಡುವುದಿಲ್ಲ. ಇದರಿಂದ ಅವರ ಕುಟುಂಬದವರಿಗೆ ಪೂರ್ವಜರಿಂದ ತೊಂದರೆಯಾಗುತ್ತದೆ.
ಪೂರ್ವಜರ ತೊಂದರೆಯಿಂದ ರಕ್ಷಣೆಗೆ ದತ್ತನ ಉಪಾಸನೆ
- ಪ್ರಸ್ತುತ ನಮಗೆ ಪೂರ್ವಜರಿಂದ ಯಾವ ತರಹದ ತೊಂದರೆಯೂ ಇಲ್ಲದಿದ್ದರೆ ಮತ್ತು ಮುಂದೆ ಆಗಬಾರದೆಂದು ಹಾಗೂ ಸ್ವಲ್ಪವೇ ತೊಂದರೆಯಿದ್ದಲ್ಲಿ ಪ್ರತಿದಿನ ಕನಿಷ್ಠಪಕ್ಷ ೩ ಜಪಮಾಲೆಯಷ್ಟು ‘ಶ್ರೀ ಗುರುದೇವ ದತ್ತ’ ಎಂದು ಜಪ ಮಾಡಬೇಕು.
- ಮಧ್ಯಮ ತೊಂದರೆಯಿದ್ದಲ್ಲಿ ಪ್ರತಿ ದಿನ ಕನಿಷ್ಠಪಕ್ಷ ೬ ಜಪಮಾಲೆಗಳಷ್ಟು ‘ಶ್ರೀ ಗುರುದೇವ ದತ್ತ’ ಎಂದು ಜಪ ಮಾಡಬೇಕು. ಹಾಗೆಯೇ ಪ್ರತಿ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆಯನ್ನು ಹಾಕಬೇಕು ಮತ್ತು ಅಲ್ಲಿ ಒಂದೆರಡು ಜಪಮಾಲೆಮಾಲೆಗಳಷ್ಟು ನಾಮ ಜಪ ಮಾಡಬೇಕು. ಇದನ್ನು ಕನಿಷ್ಠ ಪಕ್ಷ ೧ ವರ್ಷವಾದರೂ ಮಾಡಬೇಕು. ನಂತರ ದಿನಕ್ಕೆ ೩ ಜಪಮಾಲೆಗಳಷ್ಟು ಜಪವನ್ನು ಮುಂದುವರಿಸಬೇಕು.
- ತೀವ್ರ ತೊಂದರೆಯಿದ್ದರೆ ಪ್ರತಿದಿನ ಕನಿಷ್ಠಪಕ್ಷ ಒಂಬತ್ತು ಜಪಮಾಲೆಗಳಷ್ಟು ‘ಶ್ರೀ ಗುರುದೇವ ದತ್ತ’ ಎಂದು ಜಪ ಮಾಡಬೇಕು. ಯಾವುದಾದರೊಂದು ಜ್ಯೋತಿರ್ಲಿಂಗವಿರುವ ಸ್ಥಾನಕ್ಕೆ ಹೋಗಿ ಅಲ್ಲಿ ನಾರಾಯಣ ನಾಗಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ಕಾಳಸರ್ಪ ಶಾಂತಿಯಂತಹ ವಿಧಿಗಳನ್ನು ಮಾಡಬೇಕು. ಇದರೊಂದಿಗೆ ಯಾವುದಾದರೊಂದು ದತ್ತಕ್ಷೇತ್ರದಲ್ಲಿದ್ದು ಸಾಧನೆ ಮಾಡಬೇಕು ಅಥವಾ ಸಂತರ ಸೇವೆ ಮಾಡಿ ಅವರ ಆಶೀರ್ವಾದವನ್ನು ಪಡೆಯಬೇಕು.
- ಪಿತೃಕರ್ಮವನ್ನು ಮಾಡಲು ಪಿತೃಪಕ್ಷವು ಎಲ್ಲಕ್ಕಿಂತಲೂ ಉತ್ತಮವಾದ ಕಾಲವಾಗಿದೆ. ಈ ಕಾಲದಲ್ಲಿ ದತ್ತನ ನಾಮಜಪ ಮಾಡಿದರೆ ಪೂರ್ವಜರಿಗೆ ಗತಿಯು ದೊರಕಿ ಪೂರ್ವಜರ ತೊಂದರೆಯಿಂದ ರಕ್ಷಣೆಯಾಗುತ್ತದೆ. ಆದ್ದರಿಂದ ಪಿತೃಪಕ್ಷದಲ್ಲಿ ಕನಿಷ್ಠಪಕ್ಷ ಒಂಬತ್ತು ಜಪಮಾಲೆ ‘ಶ್ರೀ ಗುರುದೇವ ದತ್ತ’ ಎಂದು ನಾಮಜಪ ಮಾಡಬೇಕು.