ನಮಸ್ಕಾರ, ಬಾಲಸಂಸ್ಕಾರದ ಅಂತರ್ಜಾಲವು www.balsanskar.com, ಮರಾಠಿ ಭಾಷೆಯಲ್ಲಿ ಯುಗಾದಿಯ ಶುಭ ದಿನದಂದು ಪ್ರಾರಂಭಗೊಂಡಿತು. ಅದರ ನಂತರ ಇದೇ ಅಂತರ್ಜಾಲವು ಹಿಂದಿ ಭಾಷೆಯಲ್ಲಿ ಗುರುಪೌರ್ಣಿಮೆಯಂದು ಮತ್ತು ಆಂಗ್ಲ ಭಾಷೆಯಲ್ಲಿ ಗಣೇಶ ಚತುರ್ಥಿಯಂದು ಪ್ರಾರಂಭಗೊಂಡಿತು.
ಅಂತರ್ಜಾಲದ ವಿಳಾಸವು ಈ ಕೆಳಗಿನಂತಿದೆ
ಆಂಗ್ಲ ಭಾಷೆಯ ಜಾಲತಾಣ: www.balsanskar.com/english
ಹಿಂದಿ ಭಾಷೆಯ ಜಾಲತಾಣ: www.balsanskar.com/hindi
ಮರಾಠಿ ಭಾಷೆಯ ಜಾಲತಾಣ: www.balsanskar.com/marathi
ಪ್ರಸ್ತುತ ನಾವು ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಯ ಜಾಲತಾಣದಲ್ಲಿ ಪ್ರಕಾಶನಗೊಂಡ ಲೇಖನಗಳನ್ನು ಕನ್ನಡ ಭಾಷೆಗೆ ಭಾಷಾಂತರ ಮಾಡುತ್ತಿದ್ದೇವೆ. ನಮ್ಮಲ್ಲಿ ಈ ಉದ್ದೇಶಕ್ಕೆ ಭಾಷಾಂತರಕಾರರ ಕೊರತೆ ಇದೆ, ಅದಕ್ಕಾಗಿ ನಾವು ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತೇವೆ. ಒಂದು ವೇಳೆ ನಿಮ್ಮಲ್ಲಿ ಈ ಭಾಷೆಗಳಲ್ಲಿ ಒಳ್ಳೆಯ ಜ್ಞಾನವಿದ್ದಲ್ಲಿ ನೀವು ನಮಗೆ ಬಹುದೊಡ್ಡ ಸಹಾಯ ಮಾಡಬಹುದು. ಭಾಷಾಂತರ ಮಾಡುವಲ್ಲಿ ನಿಮ್ಮ ಸಹಾಯ ನಮಗೆ ದೊರೆತರೆ ನಾವು ನಿಮಗೆ ಕೃತಜ್ಞರಾಗಿರುತ್ತೇವೆ.
ಈ ಮಹಾನ್ ಕಾರ್ಯದಲ್ಲಿ ನಮಗೆ ಸಹಾಯ ಮಾಡಲು ಅಪೇಕ್ಷಿಸುವ ವ್ಯಕ್ತಿಗಳು ನಮ್ಮನ್ನು ಮುಂದೆ ಕೊಟ್ಟ ನಮ್ಮ ಈ-ಮೇಲ್ ಐ.ಡಿ.ಯಲ್ಲಿ ಸಂಪರ್ಕಿಸಬಹುದು baalsanskar@gmail.com
ದಯವಿಟ್ಟು ಗಮನಿಸಿ
- ಲೇಖನಗಳು ಯುನಿಕೋಡ್ನಲ್ಲಿಯೇ ಇರಲಿ. ಹಿಂದಿಯಲ್ಲಿ ಬೆರಳಚ್ಚು ಮಾಡಲು ಕೆಳಗೆ ಕೊಟ್ಟ ಸಂಪರ್ಕ ಕೊಂಡಿಯನ್ನು ಕ್ಲಿಕ್ಕಿಸಿರಿ: www.google.com/transliterate/hindi
- ಈ ಮಹಾನ್ ಕಾರ್ಯದಲ್ಲಿ ಪಾಲ್ಗೊಳ್ಳಲು ಆಸಕ್ತರಿರುವ ನಿಮ್ಮ ಕುಟುಂಬದ ಸದಸ್ಯರು ಮತ್ತು ಮಿತ್ರರಿಗೆ ಈ ಸಂದೇಶವನ್ನು ಪ್ರಸಾರ ಮಾಡಬಹುದು. ಅವರ ಸಹಾಯವನ್ನು ಪಡೆದರೆ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ.
November 23, 2011, 7:40 pm
ನಾನು ಬಾಶಾಂತರ ಮಾಡಲು ಸಿದ್ದನಿದ್ದೇನೆ. ಹೇಗೆ ಮಾಡಬಹುದು ತಿಳಿಸಿ.